ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್ ( ಉರ್ದು: ابو ظفر سِراجُ الْدین محمد بُہادر شاہ ظفر ), ಅಥವಾ ಬಹಾದುರ್ ಶಾಹ್ ಮತ್ತು ಬಹಾದುರ್ ಶಾಹ್ ೨ ( ಉರ್ದು: بہادر شاہ دوم ) (೨೪ ಅಕ್ಟೋಬರ್ ೧೭೭೫ - ೭ ನವೆಂಬರ್ ೧೮೬೨) ಮೊಘಲ್ ಸಾಮ್ರಾಜ್ಯ ಮತ್ತು ತಿಮುರಿದ್ ರಾಜವಂಶದ ಕೊನೆಯ ಚಕ್ರವರ್ತಿ. ಇವನ ತಂದೆ ಅಕ್ಬರ್ ಶಾಹ್ ೨ ಮತ್ತು ತಾಯಿ ರಾಜಪೂತರ ಹಿಂದೂ ರಾಣಿಯಾದ ಲಾಲ್‌ಬಾಯಿ. ಇವನ ತಂದೆಯ ನಿಧನದ ನಂತರ ೨೮ ಸೆಪ್ಟೆಂಬರ್ ೧೮೩೮ರಂದು ಮೊಘಲ್ ಚಕ್ರವರ್ತಿಯಾದನು.